ಇಳೆಕೆರೆ ಸುತ್ತ ಪತ್ತೇದಾರಿ ಕಥಾ ಸರಣಿ-Released all Episodes_[Watch now]___Updating..."[Read more]

ಪ್ರೇರಣಾ ಬಿಂಬ ಹಾಡಿನ ಸಂಪೂರ್ಣ (ಭಾವರ್ಥ) ಸಾರಾಂಶ (Prerana Bimba album song full meaning

ಒಂದೊ0ದು ಸಾಲು ನಮ್ಮ ಈ ಬದುಕಿಗೆ

ದಿಕ್ಸೂಚಿಯಾಗಿ ಬಂದ ಈ ಸಮಯಕೆ

ನಿರ್ಧಾರವನ್ನೇ ಬದಲಿಸೋ ಹಂತಕೆ

ಪ್ರೇರಣ ಬಿಂಬ ಆಗಿ ಬಂದಾಗಿದೆ

ಪ್ರತಿಯೊ0ದು ಮಾತುಗಳು ನಮ್ಮ ಜೀವನದಲ್ಲಿ ದಿಕ್ಸೂಚಿಯಾಗಿ ಈ ಸಮಯಕೆ ಅಂದರೆ ಪ್ರತೀ ಸಮಯದಲ್ಲಿ ಬರುತ್ತದೆ. ಹಾಗೆ ಆ ಮಾತುಗಳು ನಿರ್ಧಾರವನ್ನೇ ಬದಲಿಸುವ ಹಂತದವರೆಗೆ ಬರುತ್ತದೆ... ಅದುವೇ ಪ್ರೇರಣೆಯ ಬಿಂಬವಾಗಿ ಬರುವ ಮಾತುಗಳು ಆಗಿರುತ್ತದೆ. ಅಂದರೆ ಸ್ಪೂತಿದಾಯಕ ಮಾತುಗಳು. ಈ ಮಾತುಗಳು ನಮ್ಮ ತಂದೆ-ತಾಯಿ0ದ, ಒಳ್ಳೆಯ ಸ್ನೇಹಿತರಿಂದ, ಶಿಕ್ಷಕರಿಂದ ಹಾಗೆ ಒಳ್ಳೆಯ ವ್ಯಕ್ತಿಗಳಿಂದ ಬರಬಹುದು ಎನ್ನುವ ಅರ್ಥ “ಪ್ರೇರಣಾ ಬಿಂಬ” ಹಾಡಿನ ಪಲ್ಲವಿಯಲ್ಲಿ ಇರುವಂತದ್ದು.

ಮನಸಿನ ಭಾವದಲ್ಲಿ ಮಾತೆಲ್ಲಿದೆ

ಮಾತಿನ ಸಾಲಿನಲ್ಲಿ ಏನೋ ಇದೆ

ಇದು ಅರ್ಥನೇ ಆಗದ ಬಂಧನೇ

ತಿಳಿಯದೆ ತಿಳಿದು ಹೋದ ಈ ಸಾಲಿನ

ಪುಟಗಳ ಪ್ರತಿಗಳೇ ಇಂದು ಈ ಪ್ರೇರಣ

ಪ್ರೀತಿಸುವ ಹೃದಯದ ಬಡಿತದಾ... ಸದ್ದಿಗೆ

ಪ್ರೇರಣೆಯಾಗುವ ಪದಗಳೇ ಬೇಕಿದೆ.

ಇದು ಮುಖ್ಯವಾಗಿ ನಾವು ಯಾರನ್ನು ತುಂಬಾ ಇಷ್ಟ ಪಟ್ಟಿರುತ್ತೇವೋ ಅವರ ಮನಸ್ಸಿನ ಬಗ್ಗೆ ಇರುವುವಂತದ್ದು. ನಮ್ಮ ಆಪ್ತರ ಮನಸಿನ ಭಾವನೆಯಲ್ಲಿ ಮಾತು ಎಲ್ಲಿದೆ? ಎನ್ನುವ ಹುಡುಕಾಟ ಸಾಮಾನ್ಯವಾಗಿರುತ್ತದೆ. ಆದರೆ ಅವರ ಭಾವನೆಯಲ್ಲಿ ಒಂದು ಮಾತು ಇರುತ್ತದೆ ಮತ್ತು ಆ ಮಾತಿನಲ್ಲಿ ಏನೋ ವಿಚಾರ ಇರುತ್ತೆ. ಆದರೆ ಅದು ನಮಗೆ ಅರ್ಥ ಆಗೋದಿಲ್ಲ. ಯಾಕೆಂದರೆ  ಅವರು ನಮಗೆ ಹೇಳೋದಿಲ್ಲ. ಅದು ನಮಗೆ ಏನು ಅಂತ ತಿಳಿಯೋದಿಲ್ಲ. ಆಗ ಅದನ್ನು ತಿಳಿಯಲು ಅಂದರೆ ಆ ಭಾವನೆಯ ಮಾತಿನ ಪುಟಗಳ ಪ್ರತಿಯನ್ನು ತೆರೆಯಲು ನಾವು ಅವರೊಂದಿಗೆ ಪ್ರೇರಣೆಯುಕ್ತವಾಗಿ ಮಾತನಾಡಬೇಕು. ಅಂದರೆ ಪ್ರೀತಿಯಿಂದ ಮಾತಾಡಿ ಆ ಮನಸಿನ ಭಾವನೆಯ ಮಾತನ್ನು ತಿಳಿಯಬೇಕು. ಯಾಕೆಂದರೆ ಪ್ರೀತಿಸುವ ಹೃದಯದ ಬಡಿತದ ಸದ್ದಿಗೆ ಅಂದರೆ ನಮ್ಮ ಆಪ್ತರಿಗೆ, ನಮ್ಮಿಂದ ಪ್ರೇರಣೆಯಾಗುವ ಪದಗಳೇ ಅಂದರೆ ಪ್ರೀತಿ ತುಂಬಿದ ಮಾತುಗಳೇ ಬೇಕಿರುವುದು.

ಒಟ್ಟಾರೆಯಾಗಿ ಈ ಹಾಡಿನ ಸಾರಂಶ ಇಷ್ಟೇ, ಏನೇ ನಿರ್ಧಾರ ತೆಗೆದುಕೊಳ್ಳುವ ಮುಂಚೆ ನಮ್ಮ ಆಪ್ತರ ಸಲಹೆಯನ್ನು ಪಡೆದುಕೊಳ್ಳಿ. ನಾವು ಇಷ್ಟ ಪಡೋ ವ್ಯಕ್ತಿಗಳ, ನಮ್ಮನ್ನು ಇಷ್ಟ ಪಡೋ ವ್ಯಕ್ತಿಗಳ ಜೊತೆ ಪ್ರೀತಿಯಿಂದ ಮಾತಾಡಿ  ಎಂಬುವುದಾಗಿದೆ.

- Kumaresh Kaniyooru  (Lyricist of Prerana Bimba)