ಇಳೆಕೆರೆ ಸುತ್ತ ಪತ್ತೇದಾರಿ ಕಥಾ ಸರಣಿ-Released all Episodes_[Watch now]___Updating..."[Read more]

ಆಂಕರಿಂಗ್ ಕ್ಲಾಸ್ – ಸಂಪೂರ್ಣ ಮಾಹಿತಿ.

ಜುಲೈ ನಿಂದ ಪ್ರೀವಂತ ಕ್ರಿಯೇಟಿವ್ ಸೆಂಟರ್ ಸಂಸ್ಥೆಯ ಕನಸಿನ ಆಂಕರಿಂಗ್ ಕ್ಲಾಸ್ ಆರಂಭವಾಗಲಿದೆ.

ಈಗಾಗಲೇ ಮೋಟಿವೇಷನಲ್ ಕೋಟ್ಸ್, ವೀರರು ಅಮರರು ಎನ್ನುವ ದೊಡ್ಡ ಕಾರ್ಯಕ್ರಮವನ್ನು ಬೇರೆ ಬೇರೆ ಕಡೆಯ ಮಕ್ಕಳನ್ನು ಒಟ್ಟು ಸೇರಿಸಿ ನಿರ್ಮಾಣ ಮಾಡಿ ಯಶಸ್ಸನ್ನು ಕಂಡಿರುವ ಪ್ರೀವಂತ, ಈ ಆಂಕರಿಂಗ್ ತರಗತಿಯನ್ನು ಅಷ್ಟೇ ಯಶಸ್ವಿಯಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದೆ.

ತರಗತಿ ಹೇಗೆ ಮಾಡಲಾಗುತ್ತದೆ? ಶುಲ್ಕ ಎಷ್ಟು?

ಆಂಕರಿಂಗ್ ತರಗತಿಯನ್ನು ಮೊದಲ 1 ತಿಂಗಳು ರೆಗ್ಯುಲರ್ ಅಂದರೆ 30 ದಿನ ಪ್ರತೀ ದಿನ ಬೆಳಗ್ಗೆ 6:30 ರಿಂದ 7:30 ರವರೆಗೆ ಇರುತ್ತದೆ. Zoom app ಹಾಗು ಪ್ರೀವಂತ ವೆಬ್ ಲ್ಲಿ ಆನ್ಲೈನ್ ಮೂಲಕ ನಡೆಸಲಾಗುತ್ತದೆ  1 ತಿಂಗಳ ನಂತರ ವೀಕೆಂಡ್ ನಲ್ಲಿ ಮಾಡಲಾಗುತ್ತದೆ.

ಮೊದಲ ಒಂದು ತಿಂಗಳು ಯಾಕೆ ಪ್ರತೀ ದಿನ ಇರುತ್ತೆ ಅಂದ್ರೆ ಮಾತುಗಾರಿಕೆಯ ಬೇಸಿಕ್ ಫೌಂಡೆಷನ್ ಹಾಕಿ ಕೊಡಲಾಗುತ್ತದೆ. ನಂತರ ಪ್ರಾಕ್ಟಿಕಲ್ ಕಲಿಕೆಗಳು ಆರಂಭವಾಗುತ್ತದೆ.

ಒಂದು ತಿಂಗಳ ನಂತರ ಪ್ರಾಕ್ಟಿಕಲ್ ಕಲಿಕೆಯಲ್ಲಿ ಪ್ರತೀ ವಾರ ಕಾರ್ಯಕ್ರಮಗಳು ಸೆಟ್ ಆಗಲಿದೆ. ಯಾಕೆಂದ್ರೆ ಕಲಿತದ್ದನ್ನು ವೇದಿಕೆಯಲ್ಲಿ ತೋರಿಸಬೇಕು. ಈಗಾಗಲೆ ಈ ವೇದಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು ಮತ್ತು ಉಜಿರೆಯಲ್ಲಿ ಸೆಟ್ ಮಾಡಲಾಗಿದೆ. ಬೆಂಗಳೂರು, ಚಿತ್ರದುರ್ಗ ಮತ್ತು ಮೈಸೂರು ಭಾಗದಲ್ಲಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೀಘ್ರದಲ್ಲಿ ಇದರ ಪ್ರಕ್ರಿಯೆ ಮುಕ್ತಾಯವಾಗಲಿದೆ.

ನಿಗದಿಪಡಿಸಿದ ಶುಲ್ಕ

ಕ್ರ.ಸಂ

ತರಗತಿ

ಶುಲ್ಕ

 

1

 

ಮೊದಲ ತಿಂಗಳ ರೆಗ್ಯುಲರ್ ಕ್ಲಾಸ್ (30 ದಿನ)

 

ಪ್ರತೀ ತರಗತಿಗೆ ರೂ.30 (ತಿಂಗಳಿಗೆ ರೂ. 900)

ಮೊದಲ ತಿಂಗಳಿಗೆ ಮಾತ್ರ.

 

2

 

ಮೊದಲ ತಿಂಗಳ ಕ್ಲಾಸ್ ಮುಗಿದ ಬಳಿಕ ವೀಕೆಂಡ್ ಕ್ಲಾಸ್

 

ಪ್ರತೀ ತಿಂಗಳಿಗೆ ರೂ 400

 


ಪ್ರೀವಂತದ ಕಾರ್ಯಕ್ರಮಗಳಿಗೆ ಆಂಕರಿಂಗ್ ಕ್ಲಾಸೇ ಮಾನದಂಡ

ಹೌದು. ಮುಂದೆ ಪ್ರೀವಂತದ ಯಾವುದೇ ಕಾರ್ಯಕ್ರಮಗಳಿಗೆ ನಮ್ಮ ಆಂಕರಿಂಗ್ ಕ್ಲಾಸೇ ಮಾನದಂಡವಾಗಲಿದೆ. ಆಂಕರಿಂಗ್ ಕ್ಲಾಸಲ್ಲಿ ತರಬೇತಿ ಪಡೆಯುವ ಪುಟಾಣಿಗಳೇ ಮುಂದೆ ನಮ್ಮ ಕ್ವಾಲಿಟಿ ಕಾರ್ಯಕ್ರಮಗಳ ಸಾರಥಿಗಳಾಗಲಿದ್ದಾರೆ.

ಭವಿಷ್ಯದಲ್ಲಿ ಉತ್ತಮ ಮಾತುಗಾರರನ್ನಾಗಿ ಮಾಡುವ ಬಹುದೊಡ್ಡ ಉದ್ದೇಶ.

ನಮ್ಮ ಆಂಕರಿಂಗ್ ಕ್ಲಾಸಲ್ಲಿ ಸೇರಿಕೊಂಡ ಮಕ್ಕಳನ್ನು ಮುಂದೆ ಉತ್ತಮ ಮಾತುಗಾರನ್ನಾಗಿ ಮಾಡಬೇಕು ಎನ್ನುವ ದೊಡ್ಡ ಉದ್ದೇಶವಿದೆ.

ಒಟ್ಟಿನಲ್ಲಿ ಮಾತುಗಾರಿಗೆ ಬಹುದೊಡ್ಡ ಪ್ರೋತ್ಸಾಹಕ ಸಂಸ್ಥೆಯಾದ ಪ್ರೀವಂತ ಕ್ರಿಯೇಟಿವ್ ಸೆಂಟರ್ ನ ಈ ಆಂಕರಿಗ್ ತರಗತಿಗೆ ನಿಮ್ಮ ಮಕ್ಕಳನ್ನು ಸೇರಿಸಿ. ಉತ್ತಮ ಮಾತುಗಾರಿಕೆಯನ್ನು ಪಡೆಯಲು ಸಹಕರಿಸಿ.